Mistletoe: The Parasite We Kiss Under
The story
ಸಂಪಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಸಂಪಿಗೆ ಹೂ ನೋಡೋಕೆ ಮೇಲೆ ನೋಡಿದೆ. ಆದ್ರೆ ಹೂ ಸ್ವಲ್ಪ ವಿಚಿತ್ರವಾಗಿ ಕಾಣಿಸಿತು. ಅದು ಸಂಪಿಗೆ ಅಲ್ಲ. ಅದು ಬಂಡಳಿಕೆ. ಈ ಗಿಡ ಮರದ ಮೇಲೆ ಹೇಗೆ ಬಂದಿತು? ಇದರ ಹಣ್ಣು ತುಂಬಾ ಅಂಟು. ಬೀಜದ ಸುತ್ತ ಒಂದು ಅಂಟುವ ರಾಳೆ ಅಥವಾ ಗಮ್ ಇರುತ್ತದೆ. ಹಕ್ಕಿಗಳು ಹಣ್ಣನ್ನು ತಿನ್ನುತ್ತವೆ. ಆ ಅಂಟು ಬೀಜ ಕೊಂಬೆ ಮೇಲೆ ಅಂಟುತ್ತದೆ. ಅಲ್ಲಿಂದ ಅದು ಮೊಳಕೆ ಹೊಡೆಯುತ್ತದೆ. ವಿಡಿಯೋ ತುಣುಕಲ್ಲಿ ಕಾಣುವ ಹಕ್ಕಿ ಆಸ್ಟ್ರೇಲಿಯಾದ mistletoe bird. ಬೇರೆ ಜಾತಿ. ಆದರೆ ಈ ವಿಧಾನ ಮಿಸ್ಟಲ್‌ಟೋ ಗಿಡಗಳಲ್ಲಿ ವಿಶ್ವದಾದ್ಯಂತ ಸಾಮಾನ್ಯ. ದಕ್ಷಿಣ ಭಾರತದಲ್ಲಿ, ಈ ಬಂಡಳಿಕೆಯನ್ನು ಹೆಚ್ಚಾಗಿ ಹೂಕಡಿಕ ಹಕ್ಕಿಗಳು ವಿಸ್ತರಿಸುತ್ತವೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದು ಸಂಪೂರ್ಣ ಪರೋಪಜಿ ಅಲ್ಲ. ಇದು ಒಂದು ಅರ್ಧ ಪರೋಪಜಿ ಗಿಡ. ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳುತ್ತದೆ. ಆದರೆ ಮರದಿಂದ ನೀರು ಮತ್ತು ಖನಿಜಗಳನ್ನು ತೆಗೆದುಕೊಳ್ಳುತ್ತದೆ. ಕೊಂಬೆಗೆ ಅಂಟಿಕೊಂಡಿರುವ ಆ ಉಬ್ಬಿದ ಭಾಗ ನೋಡಿದೀರಾ ಅದೇ ಅದರ ಹೀರುಬೇರು. ಅದರ ಮೂಲಕ ಮರದ ಒಳಗಿನ ಜಲವಾಹಿನಿಗೆ ಸಂಪರ್ಕಿಸುತ್ತದೆ. ಮರ, ಹಕ್ಕಿ, ಗಿಡ ಒಂದನ್ನೊಂದು ಹಿಡಿದುಕೊಂಡಿರುವ ಜೀವಜಾಲ. ⸻ I was walking down Sampige Road, looking up at the trees to find Sampige flowers. But one flower looked different. It was not Sampige. It was Bandalike, scientifically known as Dendrophthoe falcata. How did this plant even get up there? Its fruits are extremely sticky. The seed is coated in a resinous gum called viscin. When birds eat the fruit, the sticky seed is deposited onto a branch. It adheres to the bark and begins to germinate there. The bird shown in the snippet is the Australian mistletoebird, which is a different species. However, this adhesive seed dispersal mechanism is common across mistletoe species worldwide. In South India, this species is primarily dispersed by flowerpeckers, especially the Pale-billed flowerpecker, as documented in ecological studies. This plant is not a full parasite. It is a hemiparasite. It makes its own food through photosynthesis, but draws water and minerals from the host tree. That swollen structure attached to the branch is the haustorium. Through it, the plant connects to the tree’s vascular system. Tree, bird, plant. An intricate ecological relationship unfolding quietly above us. Kuramana et al. 2020. Studies on Biology, Seed Dispersal and Host Interaction of Dendrophthoe falcata.