ಎಲ್ಲಾ ರೀಲ್ಸ್

ಕಣ್ಣು ಕಾಣದ

Kannada
Scribblygummothಪರಿಸರ

ಕಣ್ಣು ಕಾಣದ

ಕಲಾವಿದ ಕೀಟ

ಕನ್ನವ ಕೊರೆದು

ಕಹಿಯನ್ನು ಕುಡಿದು

ಕಾಲ ಕತೆಯನ್ನು

ಕೈಯ್ಯಾರೆ ಗೀಚಿದ

ಇಂತಿ ನಿಮ್ಮ

ಕುತೂಹುಳ

ನೀಲಗಿರಿ ಮರದ ಮೇಲೆ ಕಾಣುವ ಈ ಅಂಕುಡೋಂಕು ರೇಖೆಗಳು

ಒಬ್ಬ ಕಲಾವಿದನ ಕೈಬರಹವಲ್ಲ!

ಒಬ್ಬ ಕಣ್ಣು ಕಾಣದ ಪತಂಗದ ಜೀವನದ ಹಾದಿ.

ಇದರ ವೈಜ್ಞಾನಿಕ ಹೆಸರು Ogmograptis scribula.

“Ogmograptis” ಅನ್ನೋದರಲ್ಲಿ “ogmo” ಅನ್ನೋ ಪದ ಪ್ರಾಚೀನ ಯೂರೋಪಿನ ಲಿಪಿಯ ಹೆಸರಿನಿಂದ ಬಂದದ್ದು.

ಆಸ್ಟ್ರೇಲಿಯಾದ ಈ ಹುಳಿಗೆ ಆ ಲಿಪಿಯೊಂದಿಗೆ ಯಾವುದೇ ಸಂಬಂಧ ಇಲ್ಲ.

ಆದ್ರೆ ಮೊದಲ ಯೂರೋಪಿನ ವಸಾಹತುಗಾರರು ಮರದ ಮೇಲೆ ಕಾಣಿಸಿದ ಈ ಗುರುತುಗಳನ್ನು

ಅದೇ ಹಳೆಯ ಲಿಪಿಯಂತೆ ಕಂಡುಹಿಡಿದದ್ದರಿಂದ

ಈ ಹೆಸರು ಬಂದಿದೆ.

ಶತಮಾನಕ್ಕೂ ಹೆಚ್ಚು ಕಾಲ

ಎಲ್ಲರೂ ಈ ಬರಹವನ್ನು ನೋಡುತ್ತಿದ್ದರು ,

ಆದರೆ ಬರಹ ಬರೆದವನನ್ನು ಯಾರೂ ನೋಡಿರಲಿಲ್ಲ.

ಹೀಗೇ ಅದು ಆಸ್ಟ್ರೇಲಿಯಾದ ಕಾಡಿನ ಒಂದು ರಹಸ್ಯ ಚಿಹ್ನೆಯಾಗಿ ಉಳಿದಿತ್ತು.

ಈ ಪತಂಗದ ಹುಳು ಮರದ ತೊಗಟೆಯೊಳಗೆ ದಾರಿಯನ್ನು ಕೊರೆಯುತ್ತದೆ,

ಮರ ಗಾಯವಾದಾಗ ಬೆಳೆಸುವ ಹೊಸ ಮೃದುವಾದ ತಂತುಗಳನ್ನು

ಕೊನೆಯ ಹಂತದಲ್ಲಿ ಹಿಂತಿರುಗಿ ತಿಂದು

ಚಿಟ್ಟೆಯಾಗಿ ಹೊರ ಬರುತ್ತದೆ.

ಈ ಬರಹ ಶಾಶ್ವತವಲ್ಲ.

ಪರಟೆ ಉದುರಿದರೆ ಇದು ಮಾಯವಾಗುತ್ತದೆ.

ಆದರೂ ಪ್ರತೀ ಋತುವಿನಲ್ಲಿ

ಮರ ಮತ್ತೆ ಹೊಸ ಕಥೆ ಬರೆಯುತ್ತದೆ. nilgiri

The behaviour of scribbly gum moth larvae Ogmograptis sp. Meyrick (Lepidoptera: Bucculatricidae) in the Australian Capital Territory

October 2007Australian Journal of Entomology 46(4):269 - 275

DOI:10.1111/j.1440-6055.2007.00606.x